Thursday, November 20, 2008

ನಾನು ಇತೀಚೆಗೆ ಸಿಯಾಟಲ್ಲಿನ ಮಳೆತರ ....ಒಮ್ಮೆಲೇ ಜೋರಾಗಿ ಬಾರ್ಸಿದ್ರೆ ಮುಂದಿನ ಕ್ಷಣ ಒಂದು ಹನಿ ನು ಇಲ್ಲ ಅನ್ನೋ ಹಾಗೆ. ನಾನು ನನ್ ಬ್ಲಾಗ್ ಬಾಗೆ ಹೇಳ್ತಿದ್ದೀನಿ ...ಮೊದಲನೆ ದಿನ ತುಂಬ ಉತ್ಸಾಹ ಆದ್ರೆ ಬರಿಯೋಕ್ಕೆ ಏನು ಇಲ್ಲ. ಏನಾದ್ರು ಅದ್ಬುತ ಜೀವನದಲ್ಲಿ ಆದ್ದರೆ ಅದನ್ನು ಎಲ್ಲೂ ಬರೀದೆ ಹೋಗಿ ಒಂದು ದಿನ ಮರತ್ರೆ ಏನಪ್ಪಾ ಅಂಥ ಆತಂಕ ಆಗಿ ೪ ವರುಷ ದಿಂದ ಮುಂದೆ ಹಾಕ್ತಾ ಬಂದ ಕೆಲಸ ಈಗ ಮಾಡಿದೆ ಅಂತ ತೃಪ್ತಿ ಮಾಡ್ಕೊಂಡು ಎರಡು ಲೈನ್ ಬ್ಲಾಗ್ ಬರ್ದೇ. ಆದಾದ್ ಕೂಡ್ಲೇ ಮನೆ ಕಟ್ಟಿ ಜೋಶ್ನಲ್ಲಿ ಪುಟಗಟ್ಲೆ ಬರ್ದಿದ್ದೋ ಬರ್ದ್ದಿದ್ದು. ಯಾರೋ ಓದ್ತಾರೆ ಅಂತ ಅಲ್ಲ ನಂಗೆ ಹೇಳ್ಬೇಕನಿಸ್ತು ಅದಕ್ಕೆ. ಇದನ್ನೇ ಬ್ಲಾಗಿಂಗ್ ಅಂತಾರೆ ಅನ್ಸುತೆ!!!

No comments: